Belgaum:
October-02:
“All human beings in the world are physically, mentally and
They are intellectually different. Although physically fit, self-reliant are not possible. “Our organization is working in collaboration with various organizations in different countries to provide guidance and facilities to the physically challenged to lead a self-reliant life,” said Pranav Desai, founder of USA-based ‘Vice of Specially Able People’.
He spoke through video conference in the ‘Vikal Chetanari Samagri distribution program’ organized by Association of Physically Handicapped in Belagavi city at Alawanagalli Galli, Shahapur, through video conference. Construction of ramps should be done compulsorily in hospitals, schools, colleges, bus stations, railway stations, airports etc. in India. In this regard, we request the government of our organization and join hands with the government. The cooperation of Raghavendra Anvekar, the international awardee of Association of Physically Handicapped in Karnataka, is commendable. It is welcome that city servants of Belgaum are serving with self-motivation,” he said.
Amit Doshi, Secretary of Jeeto Sansthan, Social Worker was the chief guest
Wheel chair and sewing machine and twenty two bicycles were distributed.
Pranav Desai, founder of Vice of Specially Able People’ organization in the program
Association of Physically Handicapped President Arif Walekar, Secretary Girish. Raghavendra Aanvekar, Dayananda, Vaman, Neeta and city corporetors of Belgaum participated.
ಬೆಳಗಾವಿ:
ಅಕ್ಟೊಬರ್-02:
“ಜಗತ್ತಿನಲ್ಲಿರುವ ಮನುಷ್ಯರೆಲ್ಲರೂ ದೈಹಿಕವಾಗಿ, ಮಾನಸಿಕವಾಗಿ ಹಾಗೂ
ಬೌದ್ಧಿಕವಾಗಿ ಭಿನ್ನ ಭಿನ್ನವಾಗಿದ್ದಾರೆ. ದೈಹಿಕವಾಗಿ ಸದೃಢರಾಗಿದ್ದರೂ ಸ್ವಾವಲಂಬಿಗಳಾಗಳು ಸಾಧ್ಯವಾಗುತ್ತಿಲ್ಲ. ದೈಹಿಕವಾಗಿ ಸಬಲರಾಗಿಲ್ಲದ ವಿಕಲಚೇತನರು ಸ್ವಾವಲಂಬಿ ಬದುಕು ಸಾಗಿಸಲು ಬೇಕಾದ ಮಾರ್ಗದರ್ಶನ ಹಾಗೂ ಸೌಲಭ್ಯ ಒದಗಿಸುವ ನಿಟ್ಟಿನಲ್ಲಿ ನಮ್ಮ ಸಂಸ್ಥೆಯು ವಿವಿಧ ದೇಶಗಳಲ್ಲಿ ವಿವಿಧ ಸಂಘ ಸಂಸ್ಥೆಗಳ ಸಹಯೋಗದಲ್ಲಿ ಕಾರ್ಯ ನಿರ್ವಹಿಸುತ್ತಿದೆ ” ಎಂದು ಯು. ಎಸ್. ಎ. ಮೂಲದ ‘ವೈಸ್ ಆಫ್ ಸ್ಪೆಷಯಲಿ ಏಬಲ್ಡ್ ಪೀಪಲ್’ ಸಂಸ್ಥೆಯ ಸಂಸ್ಥಾಪಕ ಪ್ರಣವ ದೇಸಾಯಿ ಹೇಳಿದರು.
ಬೆಳಗಾವಿ ನಗರದ ಅಸೋಸಿಯೇಷನ್ ಆಫ್ ಫಿಜಿಕಲಿ ಹ್ಯಾಂಡಿಕ್ಯಾಪ್ಡ್ ಸಂಸ್ಥೆಯ ಸಹಯೋಗದಲ್ಲಿ ನಗರದ ಶಹಾಪುರದ ಅಳವಾನಗಲ್ಲಿ ಗಲ್ಲಿಯಲ್ಲಿ ಆಯೋಜಿಸಿದ ‘ವಿಕಲ ಚೇತನರಿಗೆ ಸಾಮಗ್ರಿ ವಿತರಣಾ ಕಾರ್ಯಕ್ರಮದಲ್ಲಿ ವಿಡಿಯೋ ಕಾನ್ಫ್-ರನ್ಸ್ ಮೂಲಕ ಮಾತನಾಡಿದ ಅವರು, ” ಜಗತ್ತಿನ ವಿಕಲಚೇತನರು ಒಮ್ಮೆ ಸಹಾಯ ಪಡೆದು ಸದುಪಯೋಗ ಪಡೆದುಕೊಂಡ ಮೇಲೆ ಇನ್ನೊಬ್ಬರಿಗೆ ಸಹಾಯ ಮಾಡುವ ಮಟ್ಟದಲ್ಲಿ ಬೆಳೆಯಬೇಕೆನ್ನುವುದೇ ನಮ್ಮ ಆಶಯವಾಗಿದೆ. ವಿಕಲ ಚೇತನರೆಲ್ಲರೂ ಎಲ್ಲರೊಂದಿಗೆ ಸರಿ ಸಮನಾಗಿ ಬಾಳಲು ಭಾರತದಲ್ಲಿ ಆಸ್ಪತ್ರೆ, ಶಾಲಾ ಕಾಲೇಜು, ಬಸ್ ನಿಲ್ದಾಣ, ರೇಲ್ವೆನಿಲ್ದಾಣ, ಏರ್-ಪೋರ್ಟ್ ಮುಂತಾದ ಕಡೆಗಳಲ್ಲಿ ಕಡ್ಡಾಯವಾಗಿ ರಾಂಪ್ಸ್ ನಿರ್ಮಿಸುವ ಕಾರ್ಯವಗಬೇಕು. ಆ ನಿಟ್ಟಿನಲ್ಲಿ ನಮ್ಮ ಸಂಸ್ಥೆಯ ಸರ್ಕಾರಕ್ಕೆ ಮನವಿ ಮಾಡುತ್ತೇವೆ ಹಾಗೂ ಸರ್ಕಾರದೊಂದಿಗೆ ಕೈ ಜೋಡಿಸುತ್ತೇವೆ. ಕರ್ನಾಟಕದಲ್ಲಿ ಬೆಳಗಾವಿಯ ಅಸೋಸಿಯೇಷನ್ ಆಫ್ ಫಿಜಿಕಲಿ ಹ್ಯಾಂಡಿಕ್ಯಾಪ್ಡ್ ಸಂಸ್ಥೆಯ ಅಂತರ್ರಾಷ್ಟ್ರೀಯ ಪ್ರಶಸ್ತಿ ಪಡೆದ ರಾಘವೇಂದ್ರ ಅನ್ವೇಕರ್ ಅವರ ಸಹಕಾರ ಶ್ಲಾಘನೀಯ. ಅವರೊಂದಿಗೆ ಬೆಳಗಾವಿಯ ನಗರ ಸೇವಕರು ಸ್ವಯಂ ಪ್ರೇರಣೆಯಿಂದ ಸೇವೆಮಾಡುತ್ತಿರುವುದು ಸ್ವಾಗತಾರ್ಹ ” ಎಂದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ ಜೀತೋ ಸಂಸ್ಥೆಯ ಕಾರ್ಯದರ್ಶಿ, ಸಮಾಜ ಸೇವಕರ ಅಮಿತ್ ದೋಷಿ ಅವರು
ವೀಲ್ ಚೇರ್ ಹಾಗೂ ಹೊಲಿಗೆ ಯಂತ್ರ ಹಾಗೂ ಇಪ್ಪತ್ತೆರಡು ಸೈಕಲ್ ಗಳನ್ನು ವಿತರಿಸಿದರು.
ಕಾರ್ಯಕ್ರಮದಲ್ಲಿ ವೈಸ್ ಆಫ್ ಸ್ಪೆಷಯಲಿ ಏಬಲ್ಡ್ ಪೀಪಲ್’ ಸಂಸ್ಥೆಯ ಸಂಸ್ಥಾಪಕ ಪ್ರಣವ ದೇಸಾಯಿ
ಅಸೋಸಿಯೇಷನ್ ಆಫ್ ಫಿಜಿಕಲಿ ಹ್ಯಾಂಡಿಕ್ಯಾಪ್ಡ್ ಸಂಸ್ಥೆಯ ಅಧ್ಯಕ್ಷ ಆರಿಫ್ ವಾಳೇಕರ್,ಕಾರ್ಯದರ್ಶಿ ಗಿರೀಶ. ರಾಘವೇಂದ್ರ ಅನೇಕರ್ಅನ್ವೇಕರ್, , ದಯಾನಂದ, ವಾಮನ, ನೀತಾ ಹಾಗೂ ಬೆಳಗಾವಿಯ ನಗರ ಸೇವಕರು ಪಾಲ್ಗೊಂಡಿದ್ದರು.